Wednesday, January 21, 2026

ವಂಚಕರು ದೋಚಿದ್ದ ₹2.16 ಕೋಟಿ ಯಶಸ್ವಿಯಾಗಿ ವಶಪಡಿಸಿಕೋಂಡ ಬೆಂಗಳೂರು ಪೊಲೀಸರು

 

 ವಂಚಕರು ದೋಚಿದ್ದ ₹2.16 ಕೋಟಿ ಯಶಸ್ವಿಯಾಗಿ ವಶಪಡಿಸಿಕೋಂಡ ಬೆಂಗಳೂರು ಪೊಲೀಸರು



ಖಾಸಗಿ ಲ್ಯಾಬೊರೇಟರೀಗೆ ಸಂಬಂಧಿಸಿದ ಮಹತ್ವದ ವ್ಯವಹಾರಗಳಲ್ಲಿ ಬಳಸಲಾಗುತ್ತಿದ್ದ -ಮೇಲ್ ಐಡಿಯನ್ನು ನಕಲಿ ಮಾಡಿ ಸು. ₹2.16 ಕೋಟಿ ವಂಚಿಸಿದ್ದ ಅಂತರರಾಷ್ಟ್ರೀಯ ಸೈಬರ್ ಅಪರಾಧ ಜಾಲವನ್ನು ಬೆಂಗಳೂರು ಸಿಸಿಬಿಯ ಸೈಬರ್ ಕ್ರೈಂ ವಿಭಾಗ ಪತ್ತೆಹಚ್ಚಿದ್ದು, ಸಂಪೂರ್ಣ ಹಣವನ್ನು ವಾಪಸ್ ಪಡೆದಿದ್ದಾರೆ.

ಸುಮಾರು ಒಂದು ವರ್ಷಗಳ ವರೆಗೆ  ನಡೆದ ತನಿಖೆಯ ನಂತರ, ವಂಚನೆಯ ಮೂಲಕ ಬೇರೆ ಖಾತೆಗೆ ವರ್ಗಾಯಿಸಲಾಗಿದ್ದ ₹2.16 ಕೋಟಿ ಮೊತ್ತವನ್ನು ಸಂಪೂರ್ಣವಾಗಿ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ಗೆ ಮರುಪಾವತಿಸಲಾಗಿದೆ. ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ02/02/2025 ರಂದು ಬೆಳಕಿಗೆ ಬಂದಿತ್ತು. ಫಾರ್ಮಾ ಕಂಪನಿಯ ಪ್ರತಿನಿಧಿಗಳು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಪ್ರಕಾರ, ವಿದೇಶದಿಂದ ಕಾರ್ಯನಿರ್ವಹಿಸುತ್ತಿದ್ದ ಸೈಬರ್ ಕಿರಾತಕರು, ಹೈದರಾಬಾದ್ ಮೂಲದ ಡಾ.ರೆಡ್ಡೀಸ್ ಲ್ಯಾಬೊರೇಟರೀ ಜೊತೆಗಿನ ವ್ಯವಹಾರಗಳಿಗೆ ಬಳಸುತ್ತಿದ್ದ ಅಧಿಕೃತ -ಮೇಲ್ ಐಡಿಯನ್ನು ನಕಲಿ ರೂಪದಲ್ಲಿ ಬಳಸಿಕೊಂಡು ಹಣ ವರ್ಗಾವಣೆ ಮಾಡಿಕೊಂಡಿದ್ದರು. ನಕಲಿ -ಮೇಲ್ ಮೂಲಕ ವಿಶ್ವಾಸ ಗಳಿಸಿದ ಆರೋಪಿಗಳು, ಹಂತವಾಗಿ ಒಟ್ಟು ₹2.16 ಕೋಟಿ ಹಣವನ್ನು ಗುಜರಾತ್ ಅಹಮದಾಬಾದ್ನಲ್ಲಿರುವ ಒಂದು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಅನುಮಾನ ಬರದಂತೆ ಹಣವನ್ನು ಒಂದೇ ಬಾರಿ ಅಲ್ಲದೆ, ಹಲವು ಹಂತಗಳಲ್ಲಿ ವರ್ಗಾವಣೆ ಮಾಡಲಾಗಿತ್ತು.

 ನೈಜೀರಿಯಾದಿಂದ ಕೃತ್ಯ

ಸಿಸಿಬಿ ಸೈಬರ್ ಕ್ರೈಂ ತಂಡ ಬ್ಯಾಂಕ್ ಆಫ್ ಬರೋಡಾಕ್ಕೆ ಕಾನೂನು ನೋಟಿಸ್ ನೀಡಿತು. ತಕ್ಷಣದ ಕ್ರಮದಿಂದಾಗಿ ಆರೋಪಿಗಳು ಹಣವನ್ನು ಸಂಪೂರ್ಣವಾಗಿ ಹಿಂಪಡೆಯುವ ಅಥವಾ ಮತ್ತೊಂದು ಖಾತೆಗೆ ವರ್ಗಾಯಿಸುವ ಮೊದಲೇ ಖಾತೆಯನ್ನು ಫ್ರೀಜ್ ಮಾಡಲಾಯಿತು. ತನಿಖೆಯಲ್ಲಿ -ಮೇಲ್ ಸ್ಪೂಫಿಂಗ್ ಕೃತ್ಯ ನೈಜೀರಿಯಾದಿಂದ ನಡೆದಿರುವುದು ದೃಢಪಟ್ಟಿತು. ಬಳಿಕ ಪ್ರಕರಣವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಜನವರಿಯಲ್ಲಿ ನ್ಯಾಯಾಲಯವು ಫ್ರೀಜ್ ಮಾಡಿದ್ದ ಹಣವನ್ನು ಬಿಡುಗಡೆ ಮಾಡಲು ಆದೇಶ ನೀಡಿತು. ಇದೀಗ ಸಂಪೂರ್ಣ ₹2.16 ಕೋಟಿ ಹಣವನ್ನು ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ಗೆ ಮರುಪಾವತಿ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.




No comments:

Post a Comment