ಬೆಂಗಳೂರು
ಬಸ್‌ನಲ್ಲಿ ಕ್ಯುಆರ್ ಕೋಡ್ ಬದಲಿಸಿ 1 ಲಕ್ಷ ರು. ದೋಚಿದ 3 ಬಿಎಂಟಿಸಿ ನಿರ್ವಾಹಕರು!ಬಿಎಂಟಿಸಿ ಬದಲು ಕಂಡಕ್ಟರ್ಸ್ ಖಾತೆಗೆ ಹೋಗ್ತಿತ್ತು ಟಿಕೆಟ್ ಹಣ |ಮೂವರು ಸಸ್ಪೆಂಡ್ಅನುಕೂಲ ಆದಾಯ ಹೆಚ್ಚಳ ಮತ್ತು ಪ್ರಯಾಣಿಕರಿಗೆ ಮಾಡಿಕೊಡುವ ಉದ್ದೇಶದೊಂದಿಗೆ ಬಿಎಂಟಿಸಿ ಜಾರಿ ಮಾಡಿರುವ ಯುಪಿಐ ಆಧಾರಿತ ವ್ಯವಸ್ಥೆ ಬಳಸಿ ನಿಗಮಕ್ಕೆ ಸೇರಬೇಕಾದಹಣತಮ್ಮ ಖಾತೆಗೆವರ್ಗಾಯಿಸುತ್ತಿದ್ದ ಮೂವರು ನಿರ್ವಾಹಕರನ್ನು ನಿಗಮ ಅಮಾನತು ಮಾಡಿದೆ.ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದೊಂದಿಗೆ ಬಿಎಂಟಿಸಿ ಹಲವು ತಿಂಗಳಿನಿಂದಯುಪಿಐ ಆಧಾರಿತ ಪೇಮೆಂಟ್ ವ್ಯವಸ್ಥೆ ಜಾರಿಗೊಳಿ ಸಿದೆ. ಅದರಿಂದಾಗಿ ಪ್ರಯಾಣಿಕರು ನಗದು ಬದಲು ಯುಪಿಐ ಮೂಲಕ ಪ್ರಯಾಣ ದರ ಪಾವತಿಸುವ ಪ್ರಮಾಣ ಹೆಚ್ಚಾಗಿದೆ. ಆದರೆ, ಈ ಯುಪಿಐ ವ್ಯವಸ್ಥೆಯನ್ನು ದುರ್ಬಳಕೆ ಮಾಡಿ ಕೊಂಡು ನಿರ್ವಾಹಕರಾದ ಸುರೇಶ್, ಆಶ್ವಕ್ ಖಾನ್ ಮತ್ತು ಚಾಲಕ ಕಂ ನಿರ್ವಾಹಕ ಮಂಚೇಗೌಡ ಅವರು ಪ್ರಯಾಣಿಕರಿಗೆ ತಮ್ಮ ಬ್ಯಾಂಕ್ ಖಾತೆಯ ಕ್ಯೂಆರ್ ಕೋಡ್ ಅನ್ನು ನೀಡಿಪ್ರಯಾಣಿಕರು ಪಾವತಿಸುತ್ತಿದ್ದ ಪ್ರಯಾಣ ಶುಲ್ಕ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.1.04 ಲಕ್ಷರು. ವಂಚನೆ: ಈ ಮೂವರು ಒಟ್ಟಾರೆ 1.04 ಲಕ್ಷರು.ಗಳನ್ನು ಬಿಎಂಟಿಸಿ ಬ್ಯಾಂಕ್ ಖಾತೆಗೆಹೋಗಬೇಕಿದ್ದ ಹಣ ವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂ ಡಿದ್ದಾರೆ. ಇದೀಗ ಮೂವರನ್ನೂ ಬಿಎಂ ಟಿಸಿ ಅಮಾನತುಮಾಡಿದ್ದು, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಇನ್ನು, ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಯುಪಿಐ ವ್ಯವಸ್ಥೆ ದುರ್ಬಳಕೆ
ತಡೆಗೆ ಬಸ್‌ಗಳಲ್ಲಿ ಡೈನಾಮಿಕ್ ಕ್ಯೂಆರ್ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದೆ. ಅದರಂತೆ ಹಣ ಪಾವತಿಗಾಗಿಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಅದು ನೇರವಾಗಿ ಬಿಎಂಟಿಸಿ ಲಿಂಕ್‌ಗೆ ಹೋಗ ಲಿದ್ದು, ಅದರ ಮೂಲಕಪ್ರಯಾಣ ಪಾವತಿಸಬಹುದಾಗಿದೆ. ಅದರಿಂದಾಗಿ ಅಕ್ರಮ ತಡೆಯಬಹುದಾಗಿದೆ
No comments:
Post a Comment