Thursday, September 19, 2019

ನಿಮ್ಮ ಜಿಕೆ

*🌸ನಿಮ್ಮಜಿಕೆ🌸*

*ಐಫಾ ಪ್ರಶಸ್ತಿ 2019: ಅತ್ಯುತ್ತಮ ನಟಿಯಾಗಿ ಅಲಿಯಾ ಭಟ್‌, ಅತ್ಯುತ್ತಮ ನಟನಾಗಿ ರಣ್‌ವೀರ್‌ ಸಿಂಗ್‌ ಗೆ ಪ್ರಶಸ್ತಿ*
======
**ನವದೆಹಲಿ: ವಾಣಿಜ್ಯ ನಗರಿ ಮುಂಬೈನಲ್ಲಿ ನಿನ್ನೆ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 20ನೇ ಆವೃತ್ತಿಯ ಅಂತಾರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ(IIFA) ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು. ರಾಜಿ ಚಿತ್ರದಲ್ಲಿನ ತಮ್ಮ ಮನೋಜ್ಞ ಅಭಿನಯಕ್ಕಾಗಿ ಅಲಿಯಾ ಭಟ್‌ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾದರೆ, ಉತ್ತಮ ನಟ ಪ್ರಶಸ್ತಿಯನ್ನು ನಟ ರಣ್‌ವೀರ್‌ ಸಿಂಗ್‌ ಪಡೆದರು.*
===
*26 ವರ್ಷದ ನಟಿ ಅಲಿಯಾ ಭಟ್‌ ನಟನೆಯ ರಾಜಿ ಸಿನಿಮಾವು ಉತ್ತಮ ಸಿನಿಮಾ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಪತ್ತೇದಾರಿ ಕಥಾಹಂದರವುಳ್ಳ ಸಿನಿಮಾದಲ್ಲಿ ಗೂಢಾಚಾರಿಯ ಪಾತ್ರವನ್ನು ನಿಭಾಯಿಸಿದ್ದಕ್ಕಾಗಿ ಮೆಚ್ಚುಗೆ ಪಡೆದ ಅಲಿಯಾ ಭಟ್‌ ಅತ್ಯುತ್ತಮ ನಟಿಯಾಗಿ ಐಫಾ ಪ್ರಶಸ್ತಿಯನ್ನು ಪಡೆದರು.*
=====
*ಇನ್ನು ಪದ್ಮಾವತ್‌ ಸಿನಿಮಾದಲ್ಲಿ ಅಲ್ಲಾವುದ್ದಿನ್‌ ಖಿಲ್ಜಿಯಾಗಿ ತಮ್ಮ ಮನೋಜ್ಞ ಅಭಿನಯವನ್ನು ತೋರಿದ್ದ ಬಾಲಿವುಡ್‌ ನಟ ರಣ್‌ವೀರ್‌ ಸಿಂಗ್‌ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ರಾಝಿ ಮತ್ತು ಪದ್ಮಾವತ್‌ ಸಿನಿಮಾಗಳು ಸುಮಾರು 10 ವಿಭಾಗಗಳಲ್ಲಿ ನಾಮಿನೇಷನ್‌ ಹೊಂದಿದ್ದವು. ಇನ್ನು ಅಂಧಾಧುನ್‌ ಸಿನಿಮಾವು 13 ನಾಮಿನೇಷನ್‌ಗಳನ್ನು ಹೊಂದುವ ಮೂಲಕ ಮೊದಲನೇ ಸ್ಥಾನದಲ್ಲಿದ್ದು, ಚಿತ್ರದ ನಿರ್ದೇಶಕ ಶ್ರೀರಾಮ್‌ ರಾಘವನ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭ್ಯವಾಗಿದೆ.*
===
*ಐಫಾ ಪ್ರಶಸ್ತಿಗೆ 20ನೇ ವರ್ಷ ತುಂಬಿದ ಸಂಭ್ರಮಕ್ಕಾಗಿ ವಿಶೇಷ ಪ್ರಶಸ್ತಿಗಳನ್ನು ಸಹ ನೀಡಲಾಗಿದ್ದು, ಚೆನ್ನೈ ಎಕ್ಸ್‌ಪ್ರೆಸ್‌ನ ನಟನೆಗಾಗಿ ದೀಪಿಕಾ ಪಡುಕೋಣೆಗೆ ವಿಶೇಷ ಪ್ರಶಸ್ತಿ ಲಭಿಸಿದೆ. ಬರ್ಫಿ ಸಿನಿಮಾಗಾಗಿ ರಣ್‌ಬೀರ್‌ ಕಪೂರ್‌ ವಿಶೇಷ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.*
=====
*3 ಈಡಿಯಟ್ಸ್‌ ಸಿನಿಮಾ ನಿರ್ದೇಶನಕ್ಕಾಗಿ ರಾಜ್ಕುಮಾರ್‌ ಹಿರಾನಿ ಅವರಿಗೆ ಅತ್ಯುತ್ತಮ ನಿರ್ದೇಶಕ, ಏ ಜಿಸ್‌ ಹೈ ಮುಷ್ಕಿಲ್‌ ಸಿನಿಮಾಕ್ಕಾಗಿ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ, ಕಹೋನಾ ಪ್ಯಾರ್‌ ಹೈ ಸಿನಿಮಾ ಅತ್ಯುತ್ತಮ ಸಿನಿಮಾವಾಗಿ ವಿಶೇಷ ಪ್ರಶಸ್ತಿಯನ್ನು ಪಡೆದಿದೆ.*
====
*ಅತ್ಯುತ್ತಮ ಸಿನಿಮಾ – ರಾಝಿ*

*ಅತ್ಯುತ್ತಮ ನಟಿ – ಅಲಿಯಾ ಭಟ್‌(ರಾಝಿ)*

*ಅತ್ಯುತ್ತಮ ನಟ – ರಣ್‌ವೀರ್‌ ಸಿಂಗ್‌(ಪದ್ಮಾವತ್‌)*

*ಅತ್ಯುತ್ತಮ ಪೋಷಕ ನಟ – ಅದಿತಿ ರಾವ್‌ ಹೈದಾರಿ(ಪದ್ಮಾವತ್‌)*

*ಅತ್ಯುತ್ತಮ ಪೋಷಕ ನಟ – ವಿಕ್ಕಿ ಕೌಶಲ್‌(ಸಂಜು)*

*ಅತ್ಯುತ್ತಮ ಚೊಚ್ಚಲ ಚಿತ್ರದ ನಟ – ಇಶಾನ್‌ ಖಟ್ಟರ್‌ (ದಡಕ್)*

*ಅತ್ಯುತ್ತಮ ಚೊಚ್ಚಲ ಚಿತ್ರದ – ಸಾರಾ ಅಲಿ ಖಾನ್‌ (ಕೇದಾರನಾಥ್‌)*

*ಅತ್ಯುತ್ತಮ ಕಥೆ – ಶ್ರೀರಾಮ್‌ ರಾಘವನ್‌, ಪೂಜಾ ಲಧಾ ಸುರ್ತಿ, ಅರ್ಜಿತ್‌ ಬಿಸ್ವಾಸ್‌, ಯೋಗೇಶ್‌ ಚಂದೇಕರ್‌ ಮತ್ತು ಹೇಮಂತ್‌ ರಾವ್‌(ಅಂಧಾಧುನ್)*

*ಅತ್ಯುತ್ತಮ ಸಂಗೀತ ನಿರ್ದೇಶಕ – ಅಮಾಲ್‌ ಮಲ್ಲಿಕ್‌, ಗುರು ರಾಂಧವ, ರೋಚಕ್‌ ಕೊಹ್ಲಿ, ಸೌರಭ್‌ -ವೈಭವ್‌ ಮತ್ತು ಜಾಕ್‌ ನೈಟ್‌(ಸೋನು ಕೆ ತಿತು ಕಿ ಸ್ವೀಟಿ)*

*ಅತ್ಯುತ್ತಮ ಸಾಹಿತ್ಯ – ಅಮಿತಾಬ್‌ ಭಟ್ಟಾಚಾರ್ಯ(ಧಡಕ್‌)*

*ಅತ್ಯುತ್ತಮ ಹಿನ್ನೆಲೆ ಗಾಯಕಿ – ಹರ್ಷದೀಪ್‌ ಕೌರ್‌ ಮತ್ತು ವಿಭಾ ಸರ್ಫ್‌(ರಾಝಿಯ ದಿಲ್‌ಬಾರೋ)*

*ಅತ್ಯುತ್ತಮ ಹಿನ್ನೆಲೆ ಗಾಯಕ – ಅರ್ಜಿತ್‌ ಸಿಂಗ್ (ರಾಝಿಯ ಏ ವಾತಾನ್‌)*

*ಭಾರತೀಯ ಸಿನಿಮಾಕ್ಕಾಗಿ ಅತ್ಯುತ್ತಮ ಕೊಡುಗೆ – ಸರೋಜ್‌ ಖಾನ್‌ ಮತ್ತು ಜಗದೀಪ್‌*

No comments:

Post a Comment